ಲೇಖಿಕಾ ಸಾಹಿತ್ಯ ವೇದಿಕೆಯ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ’ ಫಲಿತಾಂಶ ಪ್ರಕಟ

Date: 07-05-2024

Location: ಬೆಂಗಳೂರು


ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ- ಹಿರಿಯ ಲೇಖಕಿ ವಾಣಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ `ವಾಣಿ ಕೌಟುಂಬಿಕ ಕಥಾ ಸ್ಪರ್ಧೆ' ಫಲಿತಾಂಶವು ಪ್ರಕಟಗೊಂಡಿದೆ.

ಪ್ರಥಮ ಬಹುಮಾನವನ್ನು ಬೆಂಗಳೂರಿನ ರಾಧಿಕ ಗುಜ್ಜರ್ ಪಡೆದುಕೊಂಡಿದ್ದು, ಪ್ರಶಸ್ತಿಯು 1,000 ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನಕ್ಕೆ ಮೈಸೂರಿನ ಸುಚಿತ್ರಾ ಹೆಗಡೆ ಭಾಜನರಾಗಿದ್ದು, ಪ್ರಶಸ್ತಿಯು 750 ರೂ.ನಗದು ಮತ್ತು ಪ್ರಶಸ್ತಿ ಪತ್ರ, ತೃತೀಯ ಬಹುಮಾನವನ್ನು ಹುಬ್ಬಳ್ಳಿಯ ಲತಾ ಹೆಗಡೆ ಪಡೆದುಕೊಂಡಿದ್ದು, ಪ್ರಶಸ್ತಿಯು 500 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮೆಚ್ಚುಗೆ ಬಹುಮಾನವನ್ನು ಮಂಗಳೂರಿನ ಜ್ಯೋತಿ ರಾಜೇಶ್, ಬೆಳಗಾವಿಯ ನೀತಾರಾವ್, ಬೆಂಗಳೂರಿನ ಎನ್. ಶಂಕರ ರಾವ್ ಹಾಗೂ ಕುಂದಾಪುರದ ನಾಗವೇಣಿ ಶೇಖರ ಅವರು ಪಡೆದುಕೊಂಡಿದ್ದಾರೆ.

ಕಥಾಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನಿವಾಸಿ ಕನ್ನಡಿಗರಾದ ಯುಎಸ್.ಎ ಯ ಸಾವಿತ್ರಿತಾವ್(ಕ್ಲೀವ್ ಲ್ಯಾಂಡ್), ಹಾಗೂ ಲಂಡನ್ ನ ಡಾ. ಪ್ರೇಮಲತಾ ಬಿ ಅವರಿಗೆ ಅಮೆಝಾನ್ ಗಿಫ್ಟ್ ಕಾರ್ಡ್ ಬಹುಮಾನವನ್ನು ನೀಡಲಾಗುತ್ತಿದೆ.

ಬೆಂಗಳೂರಿನ ಪ್ರೊ.ಎಲ್. ಗಿರಿಜಾ ರಾವ್, ಯುಎಸ್.ಎ ದೀಪಾರಾವ್‌(ಓಹಿಯೋ) ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಕಥಾಸ್ಪರ್ಧೆಯ ಬಹುಮಾನವನ್ನು ಮೇ. 29 ಬುಧವಾರದಂದು ವಿತರಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕಿ ಲೇಖಿಕಾ ಸಾಹಿತ್ಯ ವೇದಿಕೆಯ ಶೈಲಜಾ ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

MORE NEWS

‘ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ’ ಪುರಸ್ಕೃತ ಲೇಖಕ ಲಕ್ಕೂರು ಸಿ. ಆನಂದ ಇನ್ನಿಲ್ಲ

20-05-2024 ಬೆಂಗಳೂರು

ದಲಿತ ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಹಾಗೂ ಸೃಜನಶೀಲ ಬರಹಗಾರೆಂದು ಪ್ರಖ್ಯಾತಿ ಪಡೆದ ಲಕ್ಕೂರು ಸಿ. ಆನಂದ ಅ...

ಡಾ. ಅಂಬುಜಾ ಮಳಖೇಡರ್ ಅವರ ಐದು ಕೃತಿ ಬಿಡುಗಡೆ

20-05-2024 ಬೆಂಗಳೂರು

ಕಲಬುರಗಿ: ಡಾ. ಅಂಬುಜಾ ಮಳಖೇಡರ್ ರಚಿಸಿದ ಐದು ಕೃತಿಗಳನ್ನು ಸೇಡಂನ ಸಂಸ್ಕೃತಿ ಪ್ರಕಾಶನ ಕಲಬುರಗಿಯ ಶ್ರೀಮತಿ ವೀರಮ್ಮ ಗಂಗ...

ಜಿ.ವಿ. ಆನಂದಮೂರ್ತಿ ಅವರ ಬುದ್ಧನ ಕಥೆಗಳು ಕೃತಿ ಬಿಡುಗಡೆ

20-05-2024 ಬೆಂಗಳೂರು

ಬೆಂಗಳೂರು: ಜಿ.ವಿ. ಆನಂದಮೂರ್ತಿ ಸರ್ ಅವರ ಎಂದಿಗೂ ಪ್ರಸ್ತುತವಾಗುವ, ಸರ್ವಕಾಲಿಕವಾದ ಅರಿವಿನ ಪ್ರತಿಭೆಯುಳ್ಳ ಬುದ್ಧನ ಕಥ...