ಡಾ. ನಾಗ. ಹೆಚ್. ಹುಬ್ಳಿಯವರ ಸಾವರ್ಕರ್ ಸಮಗ್ರ ಸಂಪುಟ -1 ಕೃತಿ ಬಿಡುಗಡೆ ಸಮಾರಂಭ

Date: 11-05-2024

Location: ಬೆಂಗಳೂರು


ಸಾವರ್ಕರ್ ಸಾಹಿತ್ಯ ಸಂಘ ಪ್ರಕಟಿಸುತ್ತಿರುವ ದಿ ಮಿಥಿಕ್ ಸೊಸೈಟಿಯವರ ಸಹಯೋಗದೊಂದಿಗೆ ಸಾವರ್ಕರ್ ಅವರ ಹತ್ತು ಸಂಪುಟಗಳ ಸಮಗ್ರ ಕೃತಿ ಹಾಗೂ ಕಳೆದ ವರ್ಷ ಸಂಪುಟ ಆರು ಲೋಕಾರ್ಪಣೆಗೊಂಡಿತ್ತು. ಇದೀಗ ಸಂಪುಟ ಒಂದು ಲೋಕಾರ್ಪಣೆಗೊಳ್ಳಲಿದ್ದು, ಇದೇ ಮೇ 26ರಂದು ಭಾನುವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಕರ್ಮಿ ಶ್ರೀ ಸೇತುರಾಂ ಮತ್ತು ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ವಿ ನಾಗರಾಜ್ ಅವರು ಭಾಗಿಯಾಗಲಿದ್ದಾರೆ. 900 ಕ್ಕೂ ಹೆಚ್ಚು ಪುಟಗಳು ಇರುವ ಈ ಸಂಪುಟವನ್ನು ಜಾರ್ಖಂಡ್ ನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ ನಾಗ‌ ಹೆಚ್ ಹುಬ್ಳಿ‌ ಅನುವಾದಿಸಿದ್ದಾರೆ. ಈ ಸಂಪುಟದಲ್ಲಿ ಸಾವರ್ಕರ್ ಅವರ ಬಾಲ್ಯ. ಅವರ ಹುಟ್ಟುರಾದ ಭಗೂರುನ ದಿನಗಳು, ನಾಸಿಕದಲ್ಲಿ ಕಳೆದ ಸಮಯ, ಶತ್ರುವಿನ ಶಿಬಿರದಲ್ಲಿ ಮತ್ತು ಲಂಡನ್ ಸಮಾಚಾರ ಈ ವಿಚಾರಗಳು ಈ ಸಂಪುಟದಲ್ಲಿ ನಾವು ಕಾಣಬಹುದು.

ಸಾವರ್ಕರ್ ಅವರ ಕುಟುಂಬ ಅವರ ಬಾಲ್ಯ ಮತ್ತು ತಾರುಣ್ಯದ ಅನೇಕ ರೋಚಕ ಕಥೆಗಳನ್ನು ಸ್ವತಹ ಸಾವರ್ಕರ್ ಅವರೇ ಬರೆದಿದ್ದಾರೆ ಜೊತೆಗೆ ಅವರ ಶತ್ರುವಿನ ಶಿಬಿರದಲ್ಲಿ ಇದ್ದುಕೊಂಡು ನಡೆದ ಸಾಹಸ ಕಾರ್ಯಗಳು ಮತ್ತು ಲಂಡನ್ ನಲ್ಲಿ ಮಾಡಿದ ಅನೇಕ ವಿಚಾರಗಳ ಸವಿವರ ಈ ಸಂಪುಟ ಸಾವರ್ಕರ್ ಅವರ ಜೀವನದ ಒಂದು ಭಾಗವನ್ನು ನಾವು ಓದಬಹುದು.. ಸಾವರ್ಕರ್ ಅಭಿಮಾನಿಗಳೆಲ್ಲರೂ ತಿಳಿದುಕೊಳ್ಳಲೇ ಬೇಕಾದ ಮತ್ತು ಓದಬೇಕಾದ ಸಂಪುಟವು ಇದು ಎಂದು ಹೇಳಬಹದು.

MORE NEWS

ಲೇಖಕಿಯರ ಬಗೆಗೆ ಚರ್ಚೆ ನಡೆಯುವುದಿಲ್ಲ ಎನ್ನುವುದು ವೈದೇಹಿ ಅವರ ಮಟ್ಟಿಗೆ ಸುಳ್ಳಾಗಿದೆ; ಆಶಾದೇವಿ

02-06-2024 ಬೆಂಗಳೂರು

ಬೆಂಗಳೂರು: ವೈದೇಹಿ ಅಭಿಮಾನಿಗಳ ಬಳಗದಿಂದ ವೈದೇಹಿ ಸಾಹಿತ್ಯ ಮೂರು ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮವು 2024 ಜೂನ್ 02 ...

​​​​​​​ಸಮಾಜದಲ್ಲಿರುವ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಕಾರಿ

02-06-2024 ಬೆಂಗಳೂರು

ಬೆಂಗಳೂರು: ಉತ್ಪಾದನೆ, ಸರಕು, ಬಂಡಾವಳ ಎಂದರೇನು ಎಂಬುದರ ಬಗ್ಗೆ ಮಾರ್ಕ್ಸ್ ಮುಖಾಂತರ ತಿಳಿದುಕೊಳ್ಳುವ ಪ್ರಯತ್ನ ಆಗಬೇಕು ...

ಜಾನಪದ ವಿದ್ವಾಂಸ, ಸಾಹಿತಿ ಎಂ.ಜಿ. ಈಶ್ವರಪ್ಪ ನಿಧನ

01-06-2024 ಬೆಂಗಳೂರು

ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಜಾನಪದ ವಿದ್ವಾಂಸರಾದ ಎಂ.ಜಿ. ಈಶ್ವರಪ್ಪ(74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ...