'ದಾಸಧೇನು ದಂಪತಿ -2024' ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Date: 11-05-2024

Location: ಬೆಂಗಳೂರು


ಬೆಂಗಳೂರು: ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಗಿರಿನಗರದ ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ಪ್ರಾಧ್ಯಾಪಕ ಲೇಖಕ ವಿಮರ್ಶಕ ಡಾ. ಆರ್ ವಾದಿರಾಜು ಮತ್ತು ಲಕ್ಷ್ಮಿ ರವರಿಗೆ ದಾಸಧೇನು ಟ್ರಸ್ಟ್ ವತಿಯಿಂದ 'ದಾಸಧೇನು ದಂಪತಿ -2024' ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ, "ಕನ್ನಡ ಸಾಹಿತ್ಯದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ವಿಶಿಷ್ಟ ಸಾಹಿತ್ಯ ಸಾಧಕರು ಜನಪ್ರಿಯ ಪ್ರಾಧ್ಯಾಪಕರು, ಉತ್ತಮ ವಾಗ್ಮಿಗಳು, ಶ್ರೇಷ್ಠ ಸಂಘಟಕರು, ವಿದ್ಯೆ -ವಿನಯ- ವಿವೇಕ -ಪಾಂಡಿತ್ಯ ಪ್ರತಿಭೆಗಳ ಸಂಗಮ ಡಾ. ವಾದಿರಾಜರವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಗುರುತಿಸಿ ಈ ಪ್ರಶಸ್ತಿ ಸಂದಾಯವಾಗಿರುವುದು ಅವರ ಕ್ರಿಯಾಶೀಲತೆಗೆ ಮತ್ತೊಂದು ಗರಿ," ಎಂದು ಅಭಿಪ್ರಾಯ ಪಟ್ಟರು

ಇದೇ ಸಂದರ್ಭದಲ್ಲಿ ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಪ್ರಕಟಪಡಿಸಿರುವ ಡಾ. ವಾದಿರಾಜು ರವರ ವಿಮರ್ಶಾ ಲೇಖನಗಳ ಸಂಕಲನ 'ಅನೇಕ ' ಕೃತಿಯನ್ನು ಖ್ಯಾತ ಕಾದಂಬರಿಕಾರ ಡಾ. ಸುರೇಶ ಪಾಟೀಲ ಅನಾವರಣಗೊಳಿಸಿ, ದಾಸ ಸಾಹಿತ್ಯದ ಭಕ್ತಿ ಸಾಧನೆ, ವಚನ ಸಾಹಿತ್ಯದ ಸಂವೇದನಾಶೀಲತೆ, ಸಾಹಿತ್ಯದ ಸಂಸ್ಕೃತಿ ದರ್ಶನ ಈ ಕೃತಿಯಲ್ಲಿ ಮೂಡಿದೆ ಎಂದರು.

ವೇದಿಕೆಯಲ್ಲಿ ಪ್ರಕಾಶಕ ಶಿವರಾಂ, ಪ್ರಾಧ್ಯಾಪಕ ಡಾ. ಪ್ರಹ್ಲಾದ ರೆಡ್ಡಿ, ಆಯೋಜಕರಾದ ಡಾ.ಎಸ್ ರಾಮಲಿಂಗೇಶ್ವರ (ಸಿಸಿರಾ ),ಡಾ. ಚೌಡಯ್ಯ,ಡಾ. ಡಿ ಮುರಳಿಧರ, ಡಾ. ಪಿ.ನಟರಾಜ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಬಸವ ಜಯಂತಿ ಪ್ರಯುಕ್ತ ಹಲವಾರು ಕವಿ- ಕವಿಯತ್ರಿಯರಿಂದ ಕವನ ಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

MORE NEWS

ಲೇಖಕಿಯರ ಬಗೆಗೆ ಚರ್ಚೆ ನಡೆಯುವುದಿಲ್ಲ ಎನ್ನುವುದು ವೈದೇಹಿ ಅವರ ಮಟ್ಟಿಗೆ ಸುಳ್ಳಾಗಿದೆ; ಆಶಾದೇವಿ

02-06-2024 ಬೆಂಗಳೂರು

ಬೆಂಗಳೂರು: ವೈದೇಹಿ ಅಭಿಮಾನಿಗಳ ಬಳಗದಿಂದ ವೈದೇಹಿ ಸಾಹಿತ್ಯ ಮೂರು ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮವು 2024 ಜೂನ್ 02 ...

​​​​​​​ಸಮಾಜದಲ್ಲಿರುವ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಕಾರಿ

02-06-2024 ಬೆಂಗಳೂರು

ಬೆಂಗಳೂರು: ಉತ್ಪಾದನೆ, ಸರಕು, ಬಂಡಾವಳ ಎಂದರೇನು ಎಂಬುದರ ಬಗ್ಗೆ ಮಾರ್ಕ್ಸ್ ಮುಖಾಂತರ ತಿಳಿದುಕೊಳ್ಳುವ ಪ್ರಯತ್ನ ಆಗಬೇಕು ...

ಜಾನಪದ ವಿದ್ವಾಂಸ, ಸಾಹಿತಿ ಎಂ.ಜಿ. ಈಶ್ವರಪ್ಪ ನಿಧನ

01-06-2024 ಬೆಂಗಳೂರು

ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಜಾನಪದ ವಿದ್ವಾಂಸರಾದ ಎಂ.ಜಿ. ಈಶ್ವರಪ್ಪ(74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ...