‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024ರ’ ವೆಬ್ ಸೈಟ್ ಅನಾವರಣ

Date: 09-05-2024

Location: ಬೆಂಗಳೂರು


ಬೆಂಗಳೂರು: ದಕ್ಷಿಣ ಭಾರತದ ಸಾಹಿತ್ಯ ಲೋಕದ ಮಟ್ಟಿಗೆ ಬಹುದೊಡ್ಡ ಸಾಹಿತ್ಯೋತ್ಸವವನ್ನು ‘ಬುಕ್ ಬ್ರಹ್ಮ’ ಆಯೋಜಿಸುತ್ತಿದ್ದು, ಈ ಸಂಬಂಧ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024’ ಜಾಲತಾಣವನ್ನು(ವೆಬ್ ಸೈಟ್) ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ ಹಾಗೂ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿಗಳಾದ ಆರ್. ದೊಡ್ಡೇಗೌಡರು ಅಧಿಕೃತವಾಗಿ ಅನಾವರಣಗೊಳಿಸಿದರು.

ಈ ವೇಳೆ ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಆಕೃತಿಯ ಗುರು ಪ್ರಸಾದ್ ಹೆಜ್ಜಾಜಿ, ಲೇಖಕಿ ಡಾ. ವಸುಂಧರಾ ಭೂಪತಿ, ಹೇಮಾ ಪಟ್ಟಣಶೆಟ್ಟಿ, ಜಮೀಲ್ ಸಾವಣ್ಣ, ಅಭಿನವ ರವಿಕುಮಾರ್, ಜಯಲಕ್ಷ್ಮಿ ಪಾಟೀಲ್, ಅಯೋಧ್ಯ ಪ್ರಕಾಶನದ ಶಂಕರ್, ಭಾವನ ಬೆಳಗೆರೆ, ಪದ ಪ್ರಕಾಶನದ ಧಾಮಿನಿ, ಕಾವ್ಯ ಪ್ರಕಾಶನದ ಡಾ.ರಾಜಲಕ್ಷ್ಮಿ, ಲೇಖಕ ಕಗ್ಗೆರೆ ಪ್ರಕಾಶ್, ಸ್ನೇಹ ಬುಕ್ ಹೌಸ್ ನ ಪರಶಿವಯ್ಯ, ಕದಂಬ ಪ್ರಕಾಶನದ ನಾಗೇಶ್, ಹರಿವು ಬುಕ್ಸ್ ನ ರತೀಶ್, ಪ್ರೀಸಂನ ಪ್ರಾಣೇಶ್, ವಸಂತ ಪ್ರಕಾಶನದ ಮುರಳಿ ಸೇರಿದಂತೆ ಅನೇಕ ಪ್ರಕಾಶಕರು, ಲೇಖಕರು ಉಪಸ್ಥಿತರಿದ್ದರು.

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ

ಎರಡೂವರೆ ಸಾವಿರ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ದಕ್ಷಿಣ ಭಾರತದ ಭಾಷೆಗಳ (ತಮಿಳು, ಕನ್ನಡ, ಮಲಯಾಳಂ, ತೆಲುಗು) ನಡುವಿನ ಪರಸ್ಪರ ಸಂಬಂಧವು ಐತಿಹಾಸಿಕ ಮಹತ್ವದ್ದಾಗಿದೆ. ಈ ಸಂಬಂಧವನ್ನು ಸಂಭ್ರಮಿಸಲಿಕ್ಕಾಗಿ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ.

ಭಾರತದಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಆ ಪೈಕಿ ದಕ್ಷಿಣ ಭಾರತದ ಸಾಹಿತ್ಯವು ’ಸಿಲಪ್ಪದಿಗಾರಂ’, ’ಆದಿಪುರಾಣ’, ’ರಾಮಚರಿತಂ’, ’ಆಂಧ್ರ ಮಹಾಭಾರತಂ’ ’ತಿರುನಿಝಲ್ಮಲಾ’ ಕಾವ್ಯಗಳ ಮೂಲಕ ಶ್ರೀಮಂತ ಪರಂಪರೆಗೆ ನಾಂದಿ ಹಾಡಿತು. ಹಾಗೆಯೇ ಹಲವಾರು ಆಧುನಿಕ ಕೃತಿಗಳು ಕೂಡ ಆಯಾ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿವೆ. ೫೮ ಜನ ಜ್ಞಾನಪೀಠ ಪುರಸ್ಕೃತರ ಪೈಕಿ ಈ ಪ್ರದೇಶದ ೧೯ ಜನ ಕವಿ-ಲೇಖಕರಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯಾಸಕ್ತರು ಮತ್ತು ಲೇಖಕರು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ ನಡೆಯಲಿದೆ. ಇದರಲ್ಲಿ ಪ್ರಕಾಶಕರು, ಓದುಗರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ -2024ರ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE NEWS

ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ

20-09-2024 ಬೆಂಗಳೂರು

ಮೈಸೂರು: ನಾಡಿನ ಪ್ರಸಿದ್ಧ ಹಿರಿಯ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದ...

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

19-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...