ಲೋಕಸಭೆಯಲ್ಲಿ ಚರ್ಚೆಯ ವರ್ಚಸ್ಸು ಕಳೆಗುಂದಿದೆ : ಸಂಸದ ಶಶಿ ತರೂರ್

Date: 20-01-2023

Location: ಜೈಪುರ


ಜೈಪುರ: ಲೋಕಸಭೆಯ ಹಿಂದಿನ ವರ್ಚಸ್ಸು ಕಳೆಗುಂದಿದೆ. ರಬ್ಬರ್‌ ಸ್ಟಾಂಪ್‌ ಭವನವಾಗಿ ಪರಿವರ್ತನೆಯಾಗಿದೆ ಎಂದು ತಿರುವಂತಪುರದ ಸಂಸದ ಶಶಿ ತರೂರ್ ವಿಷಾದಿಸಿದರು.

ಕೇಂದ್ರ ಸರ್ಕಾರ ತನ್ನ ಯೋಜನೆಗಳನ್ನು ಪ್ರಕಟಿಸಲು, ನೋಟಿಸ್‌ ಬೋರ್ಡ್‌ ಹಾಕಲು ಹಾಗೂ ರಬ್ಬರ್‌ ಸ್ಟಾಂಪ್‌ ಬಳಕೆಗಾಗಿ ಮಾತ್ರ ಲೋಕಸಭೆಯನ್ನು ಬಳಸಿಕೊಳ್ಳುತ್ತಿದೆ. ಹಿಂದೆ ನಡೆಯುತ್ತಿದ್ದ ಐತಿಹಾಸಿಕ ಚರ್ಚೆಗಳು ಗೌಣವಾಗಿದೆ. ವಿರೋಧ ಪಕ್ಷಗಳೊಂದಿಗಿನ ಸಂವಾದ, ವಾಗ್ವಾದಗಳು ನಡೆಯುತ್ತಿಲ್ಲ ಎಂದಿದ್ದಾರೆ.

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನ ಅವರು 'ಪ್ರಜಾಪ್ರಭುತ್ವದ ಉಳಿವು : ಪ್ರಜಾಪ್ರಭುತ್ವದ ಪೋಷಣೆ' ಗೋಷ್ಠಿಯಲ್ಲಿ ತ್ರಿಪುರ್ ದಮನ್ ಸಿಂಗ್ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತಾಡಿದರು. ಈ ಹಿಂದೆ ವಿರೋಧ ಪಕ್ಷಗಳು ಚರ್ಚೆಗಳು ನಡೆಯದಂತೆ ಪ್ರತಿಭಟಿಸುತ್ತಿದ್ದವು. ಧರಣಿಯ ಮೂಲಕ ಸದನದ ಚರ್ಚೆಗೆ ಅಡ್ಡಿಪಡಿಸುತ್ತಿತ್ತು.ಈಗ ಆಡಳಿತ ಪಕ್ಷವೇ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಹಿಂದೆ ಆರೋಗ್ಯ ಸಚಿವರಾಗಿದ್ದ ಗುಲಾಬ್ ನಬಿ ಆಜಾದ್, ಆರೋಗ್ಯ ಇಲಾಖೆ ಕರಡನ್ನೇ ತಿದ್ದಿಕೊಂಡು ಬರಲು ಒಪ್ಪಿದ್ದರು. ಅಂಥ ಮುಕ್ತ ವಾತಾವರಣ ಈಗಿಲ್ಲ.

ಅಂಬೇಡ್ಕರ್‌ ಅವರು ಸತ್ಯಾಗ್ರಹ, ಧರಣಿಗಳಿಗಿಂತ ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕು ಎಂಬುದು ಅವರ ಅಭಿಮತವಾಗಿತ್ತು. ನೆಹರೂ ಕೂಡ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದರು ಎಂದು ಶಶಿ ತರೂರ್ ವಿವರಿಸಿದರು. ಹೋರಾಟ ನಡೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಉದಾಹರಣೆಗೆ ಅಣ್ಣಾ ಹಜಾರೆಯ ಹೋರಾಟ ಬಲವಾಗಿತ್ತು, ಆದರೆ ಅದರಿಂದಾಗಿ ಒಂದೇ ಒಂದು ಯೋಜನೆಯೂ ಜಾರಿಗೆ ಬರಲಿಲ್ಲ ಎಂದು ಶಶಿ ಹೇಳಿದರು.

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...