ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಭಾವಗೀತೆ ಗಾಯನ ಸ್ಪರ್ಧೆ


ಬೆಂಗಳೂರು: ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣಾವಕಾಶ. ಡಾ. ಎಂ ಗೋಪಾಲಕೃಷ್ಣ ಅಡಿಗರ ಯಾವುದಾದರೂ ಭಾವಗೀತೆಯನ್ನು ಪ್ರಸ್ತುತ ಪಡಿಸಲು ಇದೊಂದು ಆತ್ಮೀಯ ಕರೆ. ಇದೇ 25 ಮೇ 2024 ರಂದು ಎಂ.ಬಿ.ಎ. ಹಾಲ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇಲ್ಲಿ ಭಾವಗೀತೆ ಗಾಯನ ಸ್ಫರ್ಧೆ ನಡೆಯಲಿದೆ.

ಸೂಚನೆಗಳು:

• ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಾಲೇಜಿನ ಐಡಿ ಕಾರ್ಡ್ ಅನ್ನು ತರತಕ್ಕದ್ದು.

• ಪ್ರತಿ ಶಿಕ್ಷಣ ಸಂಸ್ಥೆಯಿಂದ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.

• ಪ್ರಥಮ/ದ್ವಿತೀಯ ವರ್ಷದ ಪಿಯುಸಿ ಹಂತದ ಅಥವಾ ಡಿಗ್ರಿ ಸೇರುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು.

ಬಹುಮಾನ: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು.

ಪ್ರಥಮ ಬಹುಮಾನ-1500 ರೂ, ದ್ವಿತೀಯ-1250 ರೂ, ತೃತೀಯ-1000 ರೂ. ಬಹುಮಾನ/ಪ್ರಮಾಣ ಪತ್ರಗಳನ್ನು ಶನಿವಾರ, 1 ಜೂನ್, 2024ರಂದು ಎಂ.ಜಿ.ಎಂ. ಕಾಲೇಜು ಸಭಾಂಗಣ, ಉಡುಪಿಯಲ್ಲಿ ನಡೆಯುವ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಾ. ಕೃಷ್ಣ ಕೊತ್ತಾಯ, ನಿರ್ದೇಶಕರು ಪೂರ್ಣಪ್ರಜ್ಞ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ, ಮೊಬೈಲ್: 9886853491 ಇವರನ್ನು ಸಂಪರ್ಕಿಸಬಹುದು.

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...