ಹೊಸ ಬಗೆಯ ಯೋಚನಾಧಾರೆಯುಳ್ಳ ಕೃತಿ ‘ವೈಚಾರಿಕ ಲೇಖನಗಳು’


‘ಮನುಷ್ಯ ಸದ್ಗುಣವಂತನಾಗಿ, ಸಮಾಜಕ್ಕೆ ಹಿತವಾಗಿ ಬದುಕಬೇಕಿದ್ದರೆ ಯಾವ ನೀತಿಸಂಹಿತೆಯನ್ನು ಅನುಸರಿಸಬೇಕು ಎಂಬುವುದರ ಕುರಿತು ಮಾರ್ಗದರ್ಶಿ ಲೇಖನವಿದೆ’ ಎನ್ನುತ್ತಾರೆ ಉದಯ್ ಕುಮಾರ್ ಹಬ್ಬು. ಅವರು ವೈಚಾರಿಕ ಲೇಖನಗಳು’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಇದೊಂದು ವೈಚಾರಿಕ ಲೇಖನಗಳುಳ್ಳ ಒಂದು ಪುಸ್ತಕ. ಮನುಷ್ಯರಲ್ಲಿ ಧರ್ಮ, ದೇವರು ಮತ್ತು ಆಚರಣೆಯ ಹೆಸರಿನಲ್ಲಿ ಮನುಷ್ಯ ವಿರೋಧ ಮೂಢನಂಬಿಕೆಗಳಿವೆ ಈ ಮೌಢ್ಯಗಳು ಮನುಷ್ಯರ ಬದುಕಿನಲ್ಲಿ ಮಾರಣಾಂತಿಕ ಆಟವನ್ನು ಆಡುತ್ತದೆ. ಉದಾಹರಣೆಗಾಗಿ ಕಾಡುಗೊಲ್ಲರಲ್ಲಿ ಮಗು ಹೆತ್ತ ಬಾಣಂತಿಯನ್ನು ಊರ ಹೊರಗೆ ಗುಡಿಸಲು ಕಟ್ಟಿ ನಿಲ್ಲಿಸುವ ಮೂಢನಂಬಿಕೆ ಇದೆ. ಈ ಮೌಢ್ಯದಿಂದಾಗಿ ಎಷ್ಟೋ ಜನ ಬಾಣಂತಿಯರು ಹಾಗೂ ಶಿಶುಗಳು ಸತ್ತ ಪ್ರಕರಣಗಳು ಅನೇಕ ಇವೆ. ಸಿಡಿ, ಕೆಂಡ ಹಾಯುವುದು, ಜ್ಯೋತಿಷ್ಯಫಲ, ಹರಕೆಗಳು, ಮಡೆಸ್ನಾನ, ಈ ಮುಂತಾದ ಜೀವವಿರೋಧಿ ನಂಬಿಕೆಗಳು ಇವೆ.

ಇಂಥಹ ಮೂಢನಂಬಿಕೆಗಳನ್ನು ಈ ಗ್ರಂಥ ಪ್ರಶ್ನಿಸುತ್ತದೆ ಯಾವುದೇ ನಂಬಿಕೆಗೆ ವೈಜ್ಣಾನಿಕ ವಿವರಣೆಗಳನ್ನು ಕೇಳುತ್ತದೆ. ಅಂತೆಯೇ ಜಾತಿ ಶ್ರೇಷ್ಠತೆಯ ವ್ಯಸನ, ಕೆಳಜಾತಿಯವರ ಶೋಷಣೆ, ಅಸ್ಪೃಶ್ಯತೆಯ ದಬ್ಬಾಳಿಕೆಯನ್ನು ಈ ಗ್ರಂಥ ತರಾಟೆ ತೆಗೆದುಕೊಳ್ಳುತ್ತದೆ. ಹಿಂದುತ್ವದ ಕುರಿತು ಕೆಲವು ಅಭಿಪ್ರಾಯಗಳಿವೆ.

ಮನುಷ್ಯ ಸದ್ಗುಣವಂತನಾಗಿ, ಸಮಾಜಕ್ಕೆ ಹಿತವಾಗಿ ಬದುಕಬೇಕಿದ್ದರೆ ಯಾವ ನೀತಿಸಂಹಿತೆಯನ್ನು ಅನುಸರಿಸಬೇಕು ಎಂಬುವುದರ ಕುರಿತು ಮಾರ್ಗದರ್ಶಿ ಲೇಖನವಿದೆ. ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಅನಗತ್ಯತೆಯ ಕುರಿತು, ಲೈಂಗಿಕ ಶಿಕ್ಷಣದ ಅಗತ್ಯತೆಯ ಕುರಿತು ಬೆಳಕು ಚೆಲ್ಲ ಬಲ್ಲ ಲೇಖನವಿದೆ. ಪ್ರಶ್ನೆ ಕೇಳಿ ವಿಷಯವನ್ನು ತಿಳಿದುಕೊಳ್ಳುವ ಹಕ್ಕಿನ ಕುರಿತಾದ ಮಾಹಿತಿ ಇದೆ. ಕೊನೆಯದಾಗಿ ಕೆಲವು ಬರಹಗಳು ಚಿಂತನೆಗೀಡು ಮಾಡುತ್ತವೆ. ಹೊಸ ಬಗೆಯ ಯೋಚನಾ ಧಾರೆ ಈ ಪುಸ್ತಕದಲ್ಲಿ ಖಂಡಿತಾ ಇದೆ.

-ಉದಯ್ ಕುಮಾರ ಹಬ್ಬು

MORE FEATURES

'ಸಾವಿನ ದಶಾವತಾರ' ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ; ಎ. ಪಿ. ಅಶ್ವಿನ್ ಕುಮಾರ್

02-06-2024 ಬೆಂಗಳೂರು

"ಪ್ರತೀ ಕಾದಂಬರಿಯೂ ಎರಡು ಕೆಲಸಗಳನ್ನು ಮಾಡುತ್ತಿರುತ್ತದೆ. ಕಾದಂಬರಿ ಎನ್ನುವ ಪ್ರಕಾರವನ್ನು ಬಳಸಿಕೊಂಡು ಒಂದು ಕತೆ...

ಶೀರ್ಷೇಂಧು ಅವರ ಕೃತಿಗಳು ಬದಲಾದ ಆಧುನಿಕ ಸಮಾಜವನ್ನು ಚಿತ್ರಿಸುತ್ತವೆ

02-06-2024 ಬೆಂಗಳೂರು

‘ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ‌. ಈ ಆರೂ ಕಥೆಗಳು ಆಧುನಿಕ ಬಂಗಾಲದ ಸಾಮಾಜಿಕ ಚಿತ್ರಣವನ್ನು ಕೊಡುತ್ತದೆ...

ವಾರದ ಲೇಖಕ ವಿಶೇಷದಲ್ಲಿ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ

02-06-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಮನ...