ಪ್ರೀತಿಯ ಚಿಟ್ಟೆಯ ಬೆನ್ನೇರಿ

Author : ಮಂಗಳ ಎಂ ನಾಡಿಗ್

Pages 72

₹ 100.00




Year of Publication: 2024
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

‘ಪ್ರೀತಿಯ ಚಿಟ್ಟೆಯ ಬೆನ್ನೇರಿ’ ಮಂಗಳ ಎಂ ನಾಡಿಗ್ ಅವರ ಕವನ ಸಂಕಲನವಾಗಿದೆ. ಲೇಖಕ ಚಿಂತಾಮಣಿ ಕೊಡ್ಲೆಕೆರೆ ಅವರು ಮುನ್ನುಡಿಯಲ್ಲಿ ಕೃತಿಯ ಕುರಿತು ಹೀಗೆ ತಿಳಿಸಿದ್ದಾರೆ; ಹೂವು, ಹಕ್ಕಿ, ಕಾಡು, ನದಿ, ಚಂದ್ರ, ಸೂರ್ಯ, ನಕ್ಷತ್ರ, ನೀಲಾಕಾಶ, ಬೆಳದಿಂಗಳಿಂದ ತುಂಬಿದ ರಮ್ಯಲೋಕವದು. ಒಲಿದ ಗಂಡು, ಹೆಣ್ಣುಗಳ ಮನದ ಭಾವಲಹರಿಗಳು ತಂಗಾಳಿಯಂತೆ ಅಲ್ಲಿ ಸುಳಿದಾಡುವವು. ಒಂದವರು ನಲಿದು ಕಟ್ಟಿರುವ ಪುಟ್ಟ ಕುಟುಂಬ ಅಲ್ಲಿದೆ. ಮಗುವಿದೆ, ಮೊಮ್ಮಗುವಿದೆ, ಅವರ ನಗುವಿದೆ. ಕುಟುಂಬ ಮೌಲ್ಯವನ್ನು ನಿಷ್ಕಲ್ಮಷ ಪ್ರೀತಿಯಿಂದ ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆಯೇನಾದರೂ ಬರಡಾದರೆ ಏನು ಗತಿ? ಸರಳ ಹೃದಯದ ತಾಯಿಯರ ಪ್ರೇಮ, ಮಮತೆ, ಲಾಲನೆ, ಪಾಲನೆಗಳಿಂದ ಕುಟುಂಬ ವ್ಯವಸ್ಥೆ ಉಳಿದಿದೆ. ಮಂಗಳಾ ಈ ಇಂಥ ಲಕ್ಷಾಂತರ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನನಗೆ ಕಾಣುತ್ತಾರೆ. ಅಲ್ಲಿ ಸೋಗಿಲ್ಲ, ಕಾವ್ಯ ಸಿದ್ಧಾಂತಗಳ ಜಂಜಡವಿಲ್ಲ, ಪ್ರತಿಭಟನೆಯ ರೌದ್ರಾವತಾರವಿಲ್ಲ, ಬದಲಾಗಿ ಎಡೆ ಸಿಕ್ಕಲ್ಲಿ ಚಿಗುರುವ ಗಿಡದ ಗುಣವಿದೆ, ಎಂಥ ತಾಮಸಿಯನ್ನೂ ತನ್ನ ಪ್ರೀತಿಯಿಂದ ಕರಗಿಸುವ ಕಲಾತ್ಮಕತೆ ಇದೆ. 'ನಾನು ಒಲಿದಂತೆ ಹಾಡುವೆ' ಎಂದು ಅವರು ಹೇಳುವುದೂ ಇಲ್ಲ, ಹಾಗೆ ಬರೆಯುತ್ತಾರೆ. ಅಲ್ಲಿ ಕುಳಿತು ಅವರು ತೋರುವ ಹಕ್ಕಿಗಳನ್ನೂ ಆಕಾಶವನ್ನೂ ನೋಡಬಹುದು, ನೀರು ಕುಡಿಯಬಹುದು, ಹಣ್ಣುಗಳೂ ಸಿಗುತ್ತವೆ. ಎಂದೋ ಕೇಳಿ ಮರೆತ ಸುಂದರ ರಾಗಗಳು ನಿಮಗೆ ಮತ್ತೆ ಒದಗಿ ಬರಬಹುದು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ.

About the Author

ಮಂಗಳ ಎಂ ನಾಡಿಗ್

ಬರಹಗಾರ್ತಿ ಮಂಗಳ ಎಂ. ನಾಡಿಗ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಕಥೆ, ಕವನ, ಲೇಖನ, ಚುಟುಕು, ಆಶುಕವನ, ಆಶುಕಥೆ, ಸಂಭಾಷಣೆ, ಶಿಶುಗೀತೆ, ಲಾವಣಿ, ಹಾಸ್ಯ ಬರಹ, ಪ್ರಹಸನ, ಜಾನಪದ ಶೈಲಿಯ ಕವನ ಹೀಗೆ ಎಲ್ಲಾ ವಿಧದ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿನಯವಾಣಿ ದಿನಪತ್ರಿಕೆಯಲ್ಲಿ "ಭಾವವರ್ಷ" ಎಂಬ ಶೀರ್ಷಿಕೆಯಡಿಯಲ್ಲಿ ಅಂಕಣ ಬರಹ, ವಿಶ್ವವಾಣಿ, ಬಿ ಟ್ರೆಂಡ್ಸ್, ಅಪರಂಜಿ ಮಾಸಪತ್ರಿಕೆ, ನಯನ ಮಾಸಪತ್ರಿಕೆ, ಮಂಗಳ ವಾರಪತ್ರಿಕೆ , ಚೆನ್ನೈನ ಲಹರಿ ಪತ್ರಿಕೆ, ರಾಯಚೂರಿನ ಸ್ಟೇಟ್ ಎಕ್ಸ್ಪ್ರೆಸ್ ದಿನಪತ್ರಿಕೆ, ಶಿವಮೊಗ್ಗದ ಅಜೇಯ ಸಂಜೆ ಪತ್ರಿಕೆ, ಭೀಮ ವಿಜಯ ...

READ MORE

Related Books