ಧುತ್ತರಗಿ ಅವರ ಆಯ್ದ ನಾಟಕಗಳು

Author : ಗುಡಿಹಳ್ಳಿ ನಾಗರಾಜ

Pages 480

₹ 150.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560045
Phone: 080-22107747

Synopsys

ನಾಟಕಗಳ ರಚನೆ ಮೂಲಕ ರಂಗಭೂಮಿಗೆ ಹೊಸ ಹುರುಪನ್ನು ತಂದು, ಪ್ರಸ್ತುತ ಆಧುನಿಕ ಮಾಧ್ಯಮಕ್ಕೆ ಸವಾಲು ಒಡ್ಡುವಂತೆ ರಂಗಭೂಮಿಯನ್ನು ಬೆಳೆಸಿದವರಲ್ಲಿ “ಪಿ.ಬಿ ಧುತ್ತಗಿರಿ” ಅವರು ಪ್ರಮುಖರು. ತಮ್ಮ ನಾಟಕದ ಮೂಲವಕೇ ಜನರಿಗೆ ರಂಗಭೂಮಿಯ ಬಗ್ಗೆ ಆಸಕ್ತಿಹೊಂದುವಂತೆ ಮಾಡಿದವರು. ಸಿನಿಮಕ್ಕೂ ಇವರ ನಾಟಕ್ಕೂ ಒಂದಕ್ಕೊಂದು ಸಂಬಂಧ ಇದ್ದು ಇದಕ್ಕೆ “ಸಂಪತ್ತಿಗೆ ಸವಾಲ್” ಒಂದು ಉತ್ತಮ ಉದಾಹರಣೆಯಾಗಿದೆ. ಧುತ್ತಗಿರಿ ಅವರ ಐದು ಪ್ರಮುಖ ನಾಟಕಗಳನ್ನು ನಾಗರಾಜ್ ಗುಡಿಹಳ್ಳಿ ಅವರು ಈ ಕೃತಿಯಲ್ಲಿ ಕೊಟ್ಟಿದ್ದಾರೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books