ಬುದ್ಧ ಪ್ರಜ್ಞೆಯ ನಡಿಗೆ

Author : ಸುಭಾಷ್ ರಾಜಮಾನೆ

Pages 164

₹ 175.00




Year of Publication: 2022
Published by: ಆಕಾರ ಪ್ರಕಾಶನ

Synopsys

ಬುದ್ದ ಪ್ರಜ್ಞೆಯ ನಡಿಗೆ ಸುಭಾಷ್‌ ರಾಜಮನೆ ಅವರ ಕೃತಿಯಾಗಿದೆ. ಬುದ್ಧನ ಧ್ಯಾನಮಾರ್ಗದ ದೀಪ್ತಿಯಲ್ಲಿ ಬೆಳಗಿದ ವಿಯೆಟ್ನಾಂನ ಈ ಬೌದ್ಧ ಗುರು ತಿಚ್ ನ್ಹಾತ್ ಹಾನ್ ಅವರು ಶಾಂತಿ, ಕರುಣೆ ಹಾಗೂ ಪ್ರೀತಿಯಲ್ಲಿ ಉಸಿರಾಡುತ್ತ ಅದನ್ನು ಯುದ್ಧದ ಭಾಗವಾದ ಸೈನಿಕರಲ್ಲಿ ಬಿತ್ತಿ ಸ್ನೇಹದ ಫಲ ಪಡೆದವರು. ಬುದ್ಧನ ‘ಆನ ಪಾನ ಸತಿ’ಯ ಉಸಿರನ್ನೇ ಗಮನಿಸುವ ಧ್ಯಾನ ಒಂದು ವಿಶಿಷ್ಟ ಮನೋಮಗ್ನತೆ. ಅದರ ಸಾಕಾರ ರೂಪ ಈ ಸಂತ. ವೈರ, ದ್ವೇಷ, ಅಸೂಯೆರಹಿತ ಬದುಕಿಗೆ ಪ್ರತಿ ಮನುಷ್ಯರನ್ನು ಕೊಂಡೊಯ್ಯುವ ನಿಧಾನ ನಡಿಗೆಯ, ಶಾಂತ ಚಿತ್ತದ, ಮನದ ಅನುಸಂಧಾನದಲ್ಲಿ ತನ್ನ ಒಳಗನ್ನು ಶೋಧಿಸಿಕೊಳ್ಳುತ್ತ ಶುದ್ಧನಾದ ಯೋಗಿ ಈತ. ಈ ಗುರುವಿನ ಅಮೂಲ್ಯ ಚಿಂತನೆಗಳನ್ನು ಗೆಳೆಯ ಡಾ. ಸುಭಾಷ್ ರಾಜಮಾನೆ ಕನ್ನಡಕ್ಕೆ ಅನುವಾದಿಸಿ, ಕನ್ನಡಿಗರು ಬುದ್ಧನ ಧ್ಯಾನಮಾರ್ಗದಲ್ಲಿ ಸಾಗಲು ಸಹಾಯಕರಾಗಿದ್ದಾರೆ. ಇಂತಹ ಕೃತಿ ಕನ್ನಡಿಗರ ಶಾಂತಿ, ಸಹನೆ, ಪ್ರೀತಿಯ ಬದುಕನ್ನು ವೃದ್ಧಿಸುತ್ತದೆ ಎಂದು ಡಾ. ಜಿ. ಕೃಷ್ಣಪ್ಪ ಅವರು ಕೃತಿಯ ಬಗ್ಗೆ ತಿಳಿಸಿದ್ದಾರೆ.

About the Author

ಸುಭಾಷ್ ರಾಜಮಾನೆ
(01 June 1980)

ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎಡ್ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಾದಿಸಿರುವ ಕೃತಿಗಳು: `ದಿ ಆರ್ಟಸ್ಟ್' (ಮೈಕೆಲ್ ಹಜನ್ ವಿಸಿಯಸ್), 'ಬದುಕಿನ ಅರ್ಥವನ್ನು ಹುಡುಕುತ್ತಾ...' (ವಿಕ್ಟರ್ ಫ್ರಾಂಕ್ಲ್), 'ಮುಳುಗದಿರಲಿ ಬದುಕು' (ಎಪಿಕ್ಟೇಟಸ್), 'ರಾತ್ರಿಗೆ ಸಾವಿರ ಕಣ್ಣುಗಳು' (ಅಲೆಸ್ಸಂಡ್ರೋ ...

READ MORE

Related Books