About the Author

ಬರಹಗಾರ್ತಿ ಸುನಂದ ಸಿದ್ದಪ್ಪ ಮುಳೆ ಅವರು 1950 ಜೂನ್ 27 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಹಿಂದಿ ವಿಶಾರದ ಪದವೀಧರೆ. ’ಸುರಗಿ-ಸುಗ್ಗಿ, ಹನಿಹನಿಗಬ್ಬ’ ಪ್ರಮುಖ ಕೃತಿಗಳು. “ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ-ಬೆಳಗಾವಿಯಿಂದ ಕವಿ ಎಸ್.ಡಿ. ಇಂಚಲ ಕಾವ್ಯ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಭಾರತ ಕವಯತ್ರಿ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ , AIPC ವಿಶೇಷ ಸಮ್ಮಾನ ಪ್ರಶಸ್ತಿ, ಈಜಿಪ್ಟ್ (ಕೈರೊ) ಮತ್ತು ಟರ್ಕಿ ದೇಶ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 'ದಿ ಡಾಟರ್ ಆಫ್ ನೈಲ್' ಪ್ರಶಸ್ತಿ, ರಶಿಯಾ-ತಾಪ್ಟೆಂಟ್ ಮತ್ತು ಸಮ್ಮರಖಂಡಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ’ದಿ ವುಮನ್ ಆಫ್ ದಿ ಈಸ್ಟ್' ಪ್ರಶಸ್ತಿಗಳು ದೊರೆತಿವೆ.

ಸುನಂದ ಸಿದ್ದಪ್ಪ ಮುಳೆ

(27 Jun 1950)